ದಿ. 14-7-13ರಂದು ಬೆಂಗಳೂರಿನ ಜಯನಗರದ ರಾಷ್ಟ್ರೋತ್ಥಾನ ಯೋಗ ಕೇಂದ್ರದಲ್ಲಿ ನಡೆದ "ನಮೋ ಬ್ರಿಗೇಡ್"ನ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ವಕ್ತಾರ ತೇಜಸ್ವಿ ಸೂರ್ಯರವರು, "ಸ್ವಾತಂತ್ರ್ಯಾನಂತರ ಮೊದಲಬಾರಿಗೆ ನಂಬಬಲ್ಲಂತ ಒಬ್ಬ ಸಮರ್ಥ ವ್ಯಕ್ತಿ ನಮ್ಮೆದುರಿಗಿದ್ದಾರೆ .ಇವರು ಹುಟ್ಟುವಾಗಲೇ ಚಿನ್ನದ ಚಮಚವನ್ನು ಇಟ್ಟುಕೊಂಡುಬಂದವಾರಲ್ಲ,ಬದಲಿಗೆ, ಹೆಜ್ಜೆ ಹೆಜ್ಜೆಗೂ ಅಗ್ನಿ ಪರೀಕ್ಷೆಗಳನ್ನು ಎದುರಿಸಿ ಎಲ್ಲದರಲ್ಲೂ ಡಿಸ್ಟಿಂಕ್ಶನ್ನಲ್ಲಿ ಪಾಸ್ ಆಗಿ ಬಂದವರು. ಅದಕ್ಕಾಗಿಯೇ ಭಾರತದ ಯುವಕರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ. ನಮೋ ಎನ್ನುವುದು ಒಂದು ವ್ಯಕ್ತಿ ಅಲ್ಲ ಅದೊಂದು ಸಿದ್ದಾಂತ. ದೇಶಕ್ಕಾಗಿ ಪ್ರಾಣ ಕೊಡುವ ಅದೃಷ್ಟ ನಮಗಿಲ್ಲ , ಆದರೆ ದೇಶಕ್ಕಾಗಿ ಕೆಲಸ ಮಾಡುವ ಅವಕಾಶ ದೊರಕಿದೆ . ಬನ್ನಿ ಈ ಸದವಕಾಶ ಉಪಯೋಗಿಸಿಕೊಂಡು ಈ ಸಿದ್ದಾಂತವನ್ನು ಮನೆ-ಮನೆಗೆ , ಮನ-ಮನಕ್ಕೆ ಮುಟ್ಟಿಸೋಣ" ಎಂಬ ಕರೆ ನೀಡಿದರು.
ಉತ್ತರಾಖಂಡ ಪ್ರವಾಹದಲ್ಲಿ ಮಡಿದವರಿಗೆ ಮೌನಚರಣೆಯ ಮೂಲಕ ಶ್ರದ್ದಾಂಜಲಿ ಅರ್ಪಿಸುವುದೊಂದರಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಅತಿಥಿಗಳಾದ ತೇಜಸ್ವಿ ಸೂರ್ಯ, ಪದ್ಮಪ್ರಸಾದ್ ಹೆಗ್ಡೆ ಹಾಗೂ ಶಕುಂತಲಾ ಐಯರ್ ರವರು ದೀಪ ಬೆಳೆಗುವುದರ ಮೂಲಕ ಉದ್ಘಾಟಿಸಿದರು.ಪ್ರಮುಖರಾದ ರಾಮಕೃಷ್ಣ ಕುಲಕರ್ಣಿ ಯವರು , "ನಮೋ ಬ್ರಿಗೇಡ್"ಎಂದರೇನು ?ಇದರ ರೂಪುರೇಷೆಗಳೇನು ಎಂದು ಸವಿಸ್ತಾರವಾಗಿ ವಿವರಿಸಿದರು.
ಇದೇ ಸಮಯದಲ್ಲಿ ಬ್ರಿಗೆಡಿನ ವೆಬ್‌ಸೈಟ್, ಮಿಸ್ಡ್ ಕಾಲ್ ಸಂಖ್ಯೆ ಹಾಗೂ ಸ್ಟಿಕ್ಕ್ಕರ್ ಗಳಿಗೆ ಚಾಲನೆ ದೊರೆಯಿತು.
ಪದ್ಮಪ್ರಸಾದರು ಮಾತನ್ನಾಡುತ್ತಾ "ಆಗಸ್ಟ್ 15 1947ರಂದು ನಮಗೆ , ಸ್ವ್ವಾತಂತ್ರ್ಯ ಸಿಗಲ್ಲಿಲ್ಲ ಬದಲಾಗಿ , ಬಿಳಿ ಆಂಗ್ಲರಿಂದ ಕಪ್ಪು ಆಂಗ್ಲರಿಗೆ ಅಧಿಕಾರ ವರ್ಗಾವಣೆ ಆಯಿತು. ನಮಗೆ ಮೊದಲಬಾರಿಗೆ ಅಪ್ಪಟ ಸ್ವದೇಶಿ ನಾಯಕ ದೊರಕಿದ್ದಾನೆ. ಈಗಿನ ದೇಶದ ಸಮಸ್ಯೆಗಳಿಗೆ ಒಬ್ಬ ಸಮರ್ಥ ಪ್ರಧಾನಿ ನಮಗೆ ಬೇಕಿದೆ. ಆ ನಾಯಕಣ್ಣನ್ನು ತರುವುದು ನಮ್ಮೆಲ್ಲರ ಕರ್ತವ್ಯ. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಯವರು ನಮ್ಮನ್ನು ನಿಂದಿಸುವುದರಲ್ಲಿ ಎರಡು ಮಾತಿಲ್ಲ.ಈಗ ನಾವೆಲ್ಲ ಕೈ ಜೋಡಿಸಿ ಕೆಲಸ ಮಾಡುವ ಸಮಯ ಬಂದೊದಗಿದೆ. ನಾವೆಲ್ಲ ಕೋಮುವಾದಿಗಳು ಎಂಬ ಹಣೆಪಟ್ಟಿ ಕಟ್ಟುತ್ತರೇನಾವು ವಿಚಲಿತರಾಗದೆ ,ಈ ಮೃತ್ಯುಂಜಾಯೀ ಭಾರತಕ್ಕಾಗಿ ಮೋದಿಯಂತಹ ಸಮರ್ಥ ನಾಯಕನನ್ನು ಆರಿಸಬೇಕು" ಎಂದರು.