ದಿನಾಂಕ 28-09-2013ರ ಮದ್ಯಾನ್ಹ 12:30ರ ಹೊತ್ತಿಗೆ , ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದ ಹುತಾತ್ಮ ಭಗತ್ ಸಿಂಘರ ಜನ್ಮ ದಿನದ ಆಚರಣೆ ಹಾಗೂ ದೇಶಕ್ಕಾಗಿ ಯೋಚನೆ ಮಾಡುವಂತಹ ಅರ್ಥಪೂರ್ಣ ಕಾರ್ಯಕ್ರಮವೊಂದಕ್ಕೆ ಬೆಂಗಳೂರು ನಗರದ ಆರ್. ಎನ್. ಎಸ್. ಐ. ಟಿ ಕಾಲೇಜಿನ ಕಂಪ್ಯೂಟರ್ ವಿಭಾಗ ಸಾಕ್ಷಿಯಾಯಿತು.
HOD. of cse prof.G.T.Raju and Prof.Bhagwath Singh
ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ತರಾದ G.Tರಾಜುರವರು ಹಾಗೂ ಭಗ್ವತ್ ಸಿಂಘ್ರವರು ದೀಪ ಬೆಳಗುವುದರ ಮೂಲಕ ಪ್ರಾರಂಭವಾದ ಕಾರ್ಯಕ್ರಮ ವಿಧ್ಯಾರ್ಥಿಗಳಲ್ಲಿ ಒಬ್ಬರಾದ ವಸಿಷ್ಟ ಶಾಸ್ತ್ರಿಯವರ ಪ್ರಾಸ್ತಾವಿಕ ನುಡಿಯ ನಂತರ ಒಂದು ನಿಮಿಷದ "ದೇಶಕ್ಕೋಸ್ಕರ ಚಿಂತನೆ" ಎಂಬ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಮುಕ್ತಾಯಯಿತು.
Vasishta shastry(student) sharing his views
ಮುಖ್ಯವಕ್ತಾರ ವಸಿಷ್ಟ ಶಾಸ್ತ್ರಿ ಮಾತನಾಡುತ್ತಾ,"ಈ ದೇಶಕ್ಕಾಗಿ ಅಸಂಖ್ಯ ವೀರರು ಪ್ರಾಣಾರ್ಪಣೆ ಮಾಡಿದ್ದಾರೆ ಹಾಗೂ ಮನೆ ,ಮಠ, ಆಸ್ತಿ ಕಳೆದುಕೊಂಡಿದ್ದಾರೆ . ಆದರೆ ನಾವು ಇಂದು ಕೇವಲ ಒಬ್ಬರನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತಿದ್ದೇವೆ. ಇದು ತಪ್ಪು. ನಮ್ಮ ದೇಶ ಈ ಹಿಂದೆ ಜಗದ್ಗುರು ಸ್ಥಾನದಲ್ಲಿದಂತಹ ದೇಶ. ಆದರೆ ನಮ್ಮದೇ ಕೆಲವು ತಪ್ಪುಗಳಿಂದ ದಯನೀಯ ಸ್ಥಿತಿ ತಲುಪಿದ್ದೆವು. ಆದರೆ ತಾಯಿ ಭಾರತಿ ಪುನಹ ತಲೆ ಎತ್ತಿ ನಿಂತಿದ್ದಾಳೆ .ಈಬಾರಿ ನಮಗೆಲ್ಲ ಕೆಲಸ ಮಾಡುವ ಸದವಕಾಶ ದೊರಕಿದೆ. ನಮ್ಮ ದೇಶದಲ್ಲಿ ಭಗತ್ರಂತೆ ಅಸಂಖ್ಯಾತ ವೀರರಿದ್ದಾರೆ , ಅವರೆಲ್ಲರ ಹುಟ್ಟುಹಬ್ಬ ಆಚರಿಸಲು ಕಷ್ಟ ಸಾಧ್ಯ. ಆದರೆ ಪ್ರತಿ ಬಾರಿ ನಮ್ಮ ದೇಶಕ್ಕಾಗಿ ನಾನೇನು ಮಾಡಬಲ್ಲೆ ಎಂದು ಯೋಚಿಸಿದರೆ ಅದೇ ಅರ್ಥ ಪೂರ್ಣ ಕಾರ್ಯಕ್ರಮ ವಾಗುತ್ತದೆ" ಎಂದು ಹೇಳಿದನು ಕಾರ್ಯಕ್ರಮದ ನಂತರ ಪ್ರಾಧ್ಯಾಪಕರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.