Thursday, May 29, 2014

ಪೆದ್ರಾಮಯ್ಯನ ದರ್ಬಾರ್:ಕೆಲಸವಿಲ್ಲದ ಬಡಗಿ ಮಗನ *ಡಿ ಕೆತ್ತಿದ ಕಥೆಯಾಯಿತು ಇವರದು.


ಲ್ಲಿದ್ದೀರಿ ಸ್ವಾಮೀ ಮಾನವ ಹಕ್ಕು , ಆ ಹಕ್ಕು ,ಈ ಹಕ್ಕು ಆಯೋಗದವರೇ ?

ತನಗಿಷ್ಟ ಬಂದಂತೆ ಮದುವೆಯಾಗುವುದು ಮಾನವ ಹಕ್ಕಲ್ಲವೇ ?
ಲವ್ ಜಿಹಾದ್ ವಿಷಯ ಬಂದಾಗ ಬಾಯಿಗೆ ಬಂದಹಾಗೆ ಕಕ್ಕುತ್ತಿದ್ದಿರಿ ,
ಎಲ್ಲಿ ಹೋದಿರಿ ಈಗ ?
ಈ ಕಾರ್ಯವೈಖರಿ ನೋಡಿದರೆ ಒಂದು ನಾಣ್ನುಡಿ ನೆನಪಾಗುತ್ತಿದೆ. 
"ಕೆಲಸವಿಲ್ಲದ ಬಡಗಿ ಮಗನ ಕುಂ * ಕೆತ್ತಿದನಂತೆ "
ಈ ನಿಯಮ ಕೇವಲ ಹಿಂದುಗಳಿಗೋ  ಅಥವಾ 'ಅಲುಪಸಂಖ್ಯಾಥ'ರಿಗು 
ಅನ್ವಯವಾಗುತ್ತದೋ ಇನ್ನಷ್ಟೇ  ಹೊರಬರಬೇಕು . 

ಅಲ್ಲ ಸ್ವಾಮೀ ನಿಮಗೆ ಅಷ್ಟು ಜನಪರ ಕಾಳಜಿ ಇದ್ದರೆ ಕಲ್ಯಾಣ ಮಂದಿರಗಳಿಂದ ಹೊಟೆಲುಗಳಿಂದ ಹೊರ ಹಾಕಲ್ಪಡುವ ಆಹಾರಕ್ಕೆ ದಂಡ ವಿಧಿಸಿ.  

Sunday, May 25, 2014

ಸಾಹಿತ್ಯ ಪರಿಷತ್ತಿನಲ್ಲಿ ರಾಷ್ಟ್ರೀಯ ಸಾಹಿತ್ಯಾಸಕ್ತರಿಗೊಂದು 'ಔತಣ' ಕೂಟ


ಬೆಂಗಳೂರಿನ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ತಿನ ಸಭಾಮಂಟಪದಲ್ಲಿ "ಸಮೃದ್ದ ಸಾಹಿತ್ಯ" ಪ್ರಕಾಶನದ ೩ ಪುಸ್ತಕಗಳ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಾಹಿತಿಗಳಾದ ದೊಡ್ಡರಂಗೇ ಗೌಡರು
"ಪುಸ್ತಕಗಳು ಓದಿಸಿಕೊಂಡು ಹೋಗುವ ಹಾಗೆ ಇರಬೇಕು. ಇಲ್ಲದಿದ್ದರೆ ಓದುಗರು ಲೇಖಕರನ್ನು ಓಡಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಬರಬಹುದು" ಎಂದು ಮಾರ್ಮಿಕವಾಗಿ ನುಡಿದುದಲ್ಲದೆ ಪತ್ರಿಕೋದ್ಯಮದ ಕಷ್ಟ-ಸುಖಗಳನ್ನು ಮಂಡಿಸಿದರು . ಹೊಸದಿಗಂತ ಪತ್ರಿಕೆಯ ಸಂಪಾದಕರಾದ ದು.ಗು.ಲಕ್ಷ್ಮಣರ "ನೇರ ನೋಟ-೨" ಪುಸ್ತಕವನ್ನು ವಿಮರ್ಶಿಸುತ್ತಾ ಲಕ್ಷ್ಮಣರನ್ನು  "ಸಮಾಜ ವಿಜ್ಞಾನಿ" ಎಂದು ಕರೆದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂದರೆ ಸಮಯ ಪಾಲನೆ. ಈ ವಿಷಯಕ್ಕಾಗಿ ನಿರೂಪನೆ ಮಾಡಿದ ಹರ್ಷರವರಿಗೆ ಅಭಿನಂದನೆಗಳು . ಎಲ್ಲಾ ಅತಿಥಿಗಳಿಂದಲೂ ಭಾಷಣ ಮಾಡಿಸಿ ನಿಗದಿತ ಸಮಯದೊಳಗೆ  ಮುಗಿಸಿದರು. 
ಬಿಡುಗಡೆ ಆದ ೩ ಪುಸ್ತಕಗಳ ಬರಹಗಾರರು,ವಿಮರ್ಶಕರು ಸೇರಿದಂತೆ ಮಾಜಿ ಕಾನೂನು ಸಚಿವರು ಸುರೇಶ ಕುಮಾರ್, ಹಿರಿಯ ರಾಷ್ಟ್ರೀಯ ಸಾಹಿತಿ ಚಂದ್ರಶೇಖರ ಭಂಡಾರಿ ಯವರು ಉಪಸ್ಥಿತರಿದ್ದರು. 



ಮ್ಮ ವರದಿಗಾರನ ಅನಿಸಿಕೆ: ತುಂಬಾ ಒಳ್ಳೆಯ ಕಾರ್ಯಕ್ರಮ. ೩ ಪುಸ್ಥಗಳಲ್ಲಿ ಒಂದಾದ ಪರಮ ವೀರ ಚಕ್ರ ಪುರಸ್ಕೃತರ ಬಗೆಗಿನ ಪುಸ್ತಕವನ್ನು ಯಾವುದಾದರು ಶಾಲಾ ಕಾಲೇಜಿನಲ್ಲಿ ಲೋಕಾರ್ಪಣೆ ಮಾಡಿದ್ದರೆ ಚೆನ್ನಗಿರುತ್ತಿತ್ತು.  ಮೂರೂ ರಾಷ್ಟ್ರೀಯ ಕೃತಿಗಳೇ ಆದುದರಿಂದ  ರಾಷ್ಟ್ರೀಯ ಸಾಹಿತ್ಯಾಸಕ್ತರಿಗೊಂದು 'ಔತಣ' ಕೂಟ ವಾಗಿತ್ತೆಂದೇ ಹೇಳಬಹುದು